

6th January 2026

ಬೈಲಹೊಂಗಲ- ತಾಲೂಕಿ ನೇಗಿನಹಾಳ ಗ್ರಾಮದಲ್ಲಿ ಜನೇವರಿ 6 ರಂದು ಬೈಲಹೊಂಗಲ ತಾಲೂಕು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಪ್ರೊ. ಕೆ.ಎಸ್.ಕೌಜಲಗಿ ಆಯ್ಕೆಯಾಗಿದ್ದಾರೆ. ಸಕಲ ಸಿದ್ಧತೆಗಳು ನಡೆಯುತ್ತಿದ್ದು ನೇಗಿನಹಾಳ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಳಿಗ್ಗೆ 7.30ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀಮತಿ ರೋಹಿಣಿ ಬಾ. ಪಾಟೀಲ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ, ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಧ್ವಜಾರೋಹಣವನ್ನು
ನೆರವೇರಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಕೋಟಗಿ, ಉಪಾಧ್ಯಕ್ಷರಾದ ಶ್ರೀಮತಿ ದೀಪಾ ಬೈಲವಾಡ ಹಾಗೂ ಸರ್ವ ಸದಸ್ಯರು ಮೆರವಣಿಗೆಯನ್ನು ಉದ್ಘಾಟಿಸುವರು.
ಉಪವಿಭಾಗಾಧಿಕಾರಿಗಳಾದ ಪ್ರವೀಣ ಜೈನ್, ತಹಶೀಲ್ದಾರರಾದ ಹನಮಂತ ಶಿರಹಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವ ಜುನ್ನೂರ, ಪುರಸಭೆಯ ಮುಖ್ಯಾಧಿಕಾ-ರಿಗಳಾದ ವೀರೇಶ ಹಸಬಿ, ಡಿವೈ-ಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಂ- ುರಾದ ಶ್ರೀಮತಿ ವಿದ್ಯಾವತಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾ-ರಿಗಳಾದ ಎ.ಎನ್.ಪ್ಯಾಟಿ, ಸಿ.ವೈ. ತುಬಾಕಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಡಿ. ಹಿರೇಮಠ, ಪಿ.ಎಂ.ಪೋಷಣ ಯೋಜನೆಯ
ನಿರ್ದೇಶಕರಾದ ಶ್ರೀಮತಿ ಎಂ.ಎಸ್. ಕುಡವಕ್ಕಲಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬೆಳಿಗ್ಗೆ 10.30 ಕ್ಕೆ ಉದ್ಘಾಟನಾ ' ನಡೆಯಲಿದೆ. ಸಮಾರಂಭತೋಂಟದಾರ್ಯ ಶಾಖಾ ಮಠ, ಮುಂಡರಗಿ ಹಾಗೂ ಬೈಲೂ-ರಿನ ನಿಷ್ಕಲ ಮಂಟಪದ ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ಬೈಲಹೊಂಗಲ ಶಾಖಾ ಮೂರುಸಾವಿರ ಮಠದ ಪೂಜ್ಯರಾದ ಮ.ನಿ.ಪ್ರ ಪ್ರಭುನೀಲಕಂಠ ಮಹಾಸ್ವಾಮಿಗಳು. ಹಾಗೂ ನೇಗಿನಹಾಳ ಗ್ರಾಮದ ಸಿದ್ದಾರೂಢಮಠದ ಶ್ರೀ ಅದೈತಾನಂದ ಸಹಾಯಕ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ಕಿತ್ತೂರು ಶಾಸಕರಾದ ಬಾಬಾಸಾಹೇಬ ದೇ. ಪಾಟೀಲ ಅಧ್ಯಕ್ಷತೆ ವಹಿಸುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ তেঘ. ಚಂದ್ರಶೇಖರ ಕಂಬಾರ ಬೆಳಗಾವಿ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಶ್ರೀಮತಿ ಆಶಯ ನುಡಿಗಳನ್ನಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಶಾಂತಿನಾಥ ದಿಬ್ಬದ ಅವರು ಸರ್ವಾಧ್ಯಕ್ಷರಾದ ಪ್ರೊ. ಕೆ.ಎಸ್. ಕೌಜಲಗಿ ಅವರಿಗೆ ಧ್ವಜ ಹಸ್ತಾಂತರಿಸುವರು.
ಬೈಲಹೊಂಗಲ ಶಾಸಕರಾದ ಮಹಾಂತೇಶ Poh ಖ್ಯಾತ ಚಲನಚಿತ್ರ ನಟ-ನಿರ್ಮಾಪಕ ಶಿವರಂಜನ ಬೋಳಣ್ಣವರ, ದೂರದರ್ಶನ-ಆಕಾಶವಾಣಿ ಮತ್ತು ರಂಗಭೂಮಿ ಕಲಾವಿದ ಸಿ.ಕೆ ಮೆಕ್ಕೇದ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ, ತಾಲೂಕಾ ಪತ್ರಕರ್ತರ ಸಂಘ ಅಧ್ಯಕ್ಷ ಮಹಾಂತೇಶ ಸಿ.ತುರಮರಿ, ಭಾಗಿಯಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,
ಕಸಾಪ ಮಾರ್ಗದರ್ಶನ ಮಂಡಳಿ ಸದಸ್ಯರಾದ ಎಸ್.ಡಿ. ಗಂಗಣ್ಣವರ, ಮಹಾರುದ್ರಪ್ಪ ನಂದೆನ್ನವರ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಕೋಟಗಿ, ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಕಲ್ಲೋಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕನ್ನಡ ನುಡಿ ಹಬ್ಬಕ್ಕೆ ತಾಲೂಕಿನ గ్రామ ಎಲ್ಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು. ವಿದ್ಯಾರ್ಥಿಗಳು, ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಎಲ್ಲ ಪಂಚಾಯತಿ ಸರ್ವಸದಸ್ಯರು, ತಾಲೂಕಿನ ಎಲ್ಲ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕಿನ ಎಲ್ಲ ಮಾಧ್ಯಮ ಪ್ರತಿನಿಧಿಗಳು, ಪರಿಷತ್ತಿನ ಸದಸ್ಯರು ಹಾಗೂ ನಾಡಿನ ಎಲ್ಲ ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಸಮ್ಮೇಳನವನ್ನು ಯಶ ಸ್ವಿಗೊಳಿಸ ಬೇಕೆಂದ ತಾಲೂಕಾಧ್ಯಕ್ಷ ಎನ್.ಆರ್. ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ